/newsfirstlive-kannada/media/post_attachments/wp-content/uploads/2023/11/Flight-1.jpg)
ಮುಂಬೈ: ಪ್ರಯಾಣಿಕನೋರ್ವ ಪುಣೆಯಿಂದ ನಾಗಪುರಕ್ಕೆ ವಿಮಾನದಲ್ಲಿ ಕುಷನ್​ ಇಲ್ಲದ ಸೀಟಿನಲ್ಲಿ ಪ್ರಯಾಣಿ ಮಾಡಿದ್ದು, ಭಾರೀ ಆಕ್ರೋಶ ಹೊರಹಾಕಿದ್ದಾರೆ. ತನಗಾಗಿ ಕಾಯ್ದಿರಿಸಿದ್ದ ಸೀಟಿನಲ್ಲಿ ಕುಷನ್​​ ಇಲ್ಲದ ಫೋಟೋ ಪೋಸ್ಟ್​​ ಮಾಡಿ ಪ್ರಯಾಣಿಕ ಟ್ವೀಟ್​ ಮಾಡಿದ್ದಾರೆ.
ಈ ಸಂಬಂಧ ಮಾತಾಡಿರೋ ಪ್ರಯಾಣಿಕ ಸುಬ್ರಾತ್​ ಪಟ್ನಾಯಕ್​​​, ಹತ್ತಾರು ಸಾವಿರ ಖರ್ಚು ಮಾಡಿ ವಿಮಾನದಲ್ಲಿ ಪ್ರಯಾಣಿಸುತ್ತೇವೆ. ಪುಣೆಯಿಂದ ನಾಗಪುರಕ್ಕೆ ಹೋಗೋ ವಿಮಾನದಲ್ಲಿ ಸೀಟಿನಲ್ಲಿ ಕುಷನ್​​ ಇರಲೇ ಇಲ್ಲ. ಲಾಭ ಮಾಡಲು ಒಳ್ಳೇ ಐಡಿಯಾ. ಎಂಥಾ ಕೆಟ್ಟ ವ್ಯವಸ್ಥೆ ಇದು ಎಂದು ಟ್ವೀಟ್​ ಮಾಡಿದ್ದಾರೆ.
#Indigo !! #Flight 6E 6798 !! Seat no 10A ! Pune to Nagpur!!! Today’s status … Best way to increase profit ??…Pathetic … pic.twitter.com/tcXHOT6Dr5
— Subrat Patnaik (@Subu_0212)
#Indigo !! #Flight 6E 6798 !! Seat no 10A ! Pune to Nagpur!!! Today’s status … Best way to increase profit 😢😢…Pathetic … pic.twitter.com/tcXHOT6Dr5
— Subrat Patnaik (@Subu_0212) November 25, 2023
">November 25, 2023
ಇನ್ನು, ಈ ಟ್ವೀಟ್​ಗೆ ಹಲವರು ರೀಪ್ಲೆ ಮಾಡಿದ್ದಾರೆ. ಇದೊಂದು ದುರವಸ್ಥೆ. ಕಂಪನಿ ಈ ಕೂಡಲೇ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಇಂಡಿಗೋ ಏರ್ಲೈನ್​​​ ನಿಮಗೆ ಆದ ತೊಂದರೆಗೆ ಕ್ಷಮೆ ಇರಲಿ. ಈ ಸಮಸ್ಯೆ ಕೂಡಲೇ ಇತ್ಯರ್ಥ ಮಾಡುತ್ತೇವೆ ಎಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us